ಶನಿವಾರ, ಆಗಸ್ಟ್ 20, 2011

ನವಿಲು ಗರಿ

ಬೀಸುತಿತ್ತು ಒಂದು ತಣ್ಣನೆ ಗಾಳಿ
ರಾತ್ರಿಯ ಮೈಸವರಿ ಜೋಕಾಲಿ
ಕಿಟಕಿ ಸಂದಿಗಿಣುಕಿದ ಸೂರ್ಯ
ಅಲ್ಲೇ ಕಣ್ಣಗಲಿಸಿ ನಕ್ಕಿತು
ಒಂದು ನವಿಲು ಗರಿ..!

ಶುಭ್ರ ನೆನಪೊಂದು ಜೀಕಿ
ಸೊಂಟಗುಂಟದ ಮುಡಿ ಚದುರಿ
ದೇವಿಯ ತಲೆಸವರಿ ಬಿದ್ದ ಗರಿ.!

ಮಲಗಿತ್ತು ಗಾಳಿ ಗಾಳಕ್ಕೆ ಬೆಚ್ಚಿ
ನೆಲದಲ್ಲೇ ಹುಸಿನಿದ್ದೆಗೆ ಜಾರಿ..!

ಆ ಕೃಷ್ಣವೇಣಿಗೆ ಅಷ್ಟಗಲದ ಕಣ್ಣು
ನೀಲಿ.. ಅದನ್ನಪ್ಪಿದ ಕಪ್ಪು
ಅದನೋಡುತ ಕುಳಿತ ಗಿಳಿ ಹಸಿರು
ಮತ್ತೊಮ್ಮೆ ಕಪ್ಪು,ಅದ ಬೇಧಿಸಿದ ನೀಲಿ
ಇವೆಲ್ಲವನ್ನೂ ಕಾಪಿಟ್ಟ ಬಿಳಿ
ಕಣ್ಣು ಪಿಳಿಪಿಳಿ... ಗಾಳಿಗದುರಿ
ರೆಪ್ಪೆಯೊಳಗೆ ಕಣ್ಣ ನಗಾರಿ.

ಹಾಗೆ ಬೆರಳ ಸ್ಪರ್ಶಕ್ಕದ್ದುತ್ತೇನೆ
ಕೈಯ ಮಂಚದಿ ಹುಸಿ ನಾಚಿಕೆ
ದೇವಿಯ ಪ್ರೀತಿ ಹನಿಗೆ
ಒರೆಸುತ್ತಿತ್ತು  ಮನಸ್ಸು ಮತ್ತೊಮ್ಮೆ ಹಾರಿ
ಮುಡಿ ತಂದ ಸುವಾಸನೆಗೆ ಅಮಲೇರಿ
ನನಪೀಗ  ನವಿಲುಗರಿ...!
----------------------------------
-ರವಿ ಮೂರ್ನಾಡು
ಚಿತ್ರ ಕೃಪೆ: www.shutterstod.com

5 ಕಾಮೆಂಟ್‌ಗಳು:

  1. ನಿಮ್ಮ ರಚನೆಗಳಲ್ಲಿ (ನಾನು ಓದಿದ್ದರಲ್ಲಿ) ಒಳ್ಳೆಯ ಕವನ ಇದು. ಪ್ರತಿಯೊಂದಕ್ಕೂ ಪ್ರತೀಕವಾಗಿ ಬೆಳೆಯುತ್ತಾ ಸಾಗುವ ಕವನ , ನವಿಲುಗರಿಯ ನೆನಪಿನೊಂದಿಗೆ ಒಳ್ಳೆ ಮುಕ್ತಾಯ ಹೊಂದುತ್ತದೆ.

    ರಾಧೆಯೇ ಅಲ್ಲ ರುಕ್ಮಿಣಿ ಭಾಮೆಯರೇ ಎಂದು ಸೋಜಿಗಪಟ್ಟುಕೊಳ್ಳುತ್ತೇನೆ .

    ಪ್ರತ್ಯುತ್ತರಅಳಿಸಿ
  2. ದೇವಿಯ ಪ್ರೀತಿ ಎಂದೂ ಚಿರಾಯುವಾಗಲಿ.

    ನಿಮ್ಮ ನವಿಲುಗರಿಯನ್ನು ನಾನು ನನ್ನ ಮನಸ್ಸಿನ ಪುಸ್ತಕದ ಒಳಗಡೆ ಬಚ್ಚಿಟ್ಟುಕೊಳ್ಳುತ್ತೇನೆ. ನೋಡೋಣ ಅದೂ ಮರಿ ಹಾಕಿದರೂ ಹಾಕೀತು!

    ಈ ಕವನದಲ್ಲಿರುವ ಪ್ರೀತಿಯ ಬಿಸುಪು ಮತ್ತು ನವಿರಾದ ವಿರಹ ಮನ ಮುಟ್ಟಿತು. ಒಳ್ಳೆ ಕವನ ಓದಿದ ನಂತರವೂ ಅದು ನಮ್ಮನ್ನು ತಾಕುತ್ತಲೇ ಇದ್ದರೆ ಅದು ಅರಳಿದ್ದಕ್ಕೂ ಸಾರ್ಥಕ್ಯ. ಈ ಕವನವೂ ಅಂತಹ ಬಂಗಾರದ ಹೂವೇ.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ಪ್ರತ್ಯುತ್ತರಅಳಿಸಿ