ಬುಧವಾರ, ಜೂನ್ 6, 2012

ಇದೊ೦ದು ರೇಖೆ

Art By.M.S.Moorty
ಏನನ್ನೋ ಹುಡುಕಿ ಬಾಡಿವೆ ಕಂಗಳು

ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ

ಕೆದರಿ ಸೋತಿವೆ ಬಿಳಿ ಕೂದಲು


ತಬ್ಬಿಕೊಂಡ ಜೋಡಿ ಬೈತಲೆ ಮೈಗಳು

ಆಗಾಗ್ಗೆ ಬೆದರಿ ನೋಡುತ್ತಿವೆ

ಹಿಂಬದಿ ತಬ್ಬಿದ ನೆರಳುಗಳು

ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ

ಮೆಟ್ಟಿಲ ಹುಡುಕಿವೆ ಜಡೆಗಳು


ಇದೀಗ ಮೂರ್ತವಾಯಿತು

ಮಲಗಿ ಸಪೂರ ಬೆಟ್ಟದೆಗಲಿಗೆ

ಚಾಚಿ ಎಡೆಮುರಿ ಕಟ್ಟಿ ಕೈಕಾಲು

ಇದೊಂದು ರೇಖೆ

ಮೂರಡಿಗೆ ಅಳೆದ ಕೋಲು

ಬಿಳಿಗೂದಲು-ಬೆತ್ತಲೆ ಮೈ

ಸಾವಧಾನಕೆ ಕುಳಿತಿದೆ

ಕುಳಿತಂತಿದೆ..

ಇನ್ನೇನು ಎತ್ತೊಯ್ಯುವರು

http://avadhimag.com/?p=54701

4 ಕಾಮೆಂಟ್‌ಗಳು:

  1. ಚೆನ್ನಾಗಿದೆ ಗುರುಗಳೇ..
    ಸಾವಾಧನಕೆ=ಸಾವಧಾನಕೆ
    ಎತ್ತೋಯ್ಯುವರು=ಎತ್ತೊಯ್ಯುವರು
    ಅಲ್ಲವೇ ಅನಿಸಿತು..

    ಮೈಯಲ್ಲಿ ಕಸುವಿರೋ ತನಕ ನೂರೆಂಟು ಆಸೆಗಳು. ಅದೇ ಬತ್ತಿದ ಮೇಲೆ ಒಣ ಕನಸುಗಳಂತೆ, ದೇಹ ಭಾವಗಳೂ ಒಣಗಿ ಹೊತ್ತೊಯ್ಯುವ ಚಿಂತೆಯೇ ತುಂಬುವುದು..ಇಂದ ಮರೆತು ನಿನ್ನೆ, ನಾಳೆಗಳ ಚಿಂತೆಯಲಿ ಕಳೆಯುವುದೇ, ಚಿಂತೆಯೇ ಬದುಕೇ ?

    ಪ್ರತ್ಯುತ್ತರಅಳಿಸಿ
  2. ಮಾನ್ಯ ಪ್ರಶಸ್ತಿ ತಿದ್ದಿದ್ದಕ್ಕೆ ಧನ್ಯವಾದಗಳು.
    ಮನಪೂರ್ವಕವಾಗಿ ತಲೆ ಬಾಗುತ್ತೇನೆ. ವಂದನೆಗಳು.

    ಪ್ರತ್ಯುತ್ತರಅಳಿಸಿ
  3. ಸಾರ್, ಯಾಕೋ ನನ್ನ ವೃದ್ಧಾಪ್ಯದ ಘೋರ ಭವಿಷ್ಯವನ್ನು ಬರೆದಿಟ್ಟಿರೇನೋ ಅನಿಸಿತು. ಯಾವ ಗಳಿಗೆಯಲ್ಲಿ ಯಾವುದು ಸತ್ಯವೋ ಅದೇ ಮೂರ್ತ ಅಂತಿಟ್ಟುಕೊಂಡರೆ ಈ ಪರಿಯ ಪ್ರೇಮದ ಅಮೂರ್ತತೆಯೂ ಬಲು ಕಾಡುತ್ತದೆ.

    ನನ್ನನ್ನು ತೀವ್ರ ಚಿಂತನೆಗೆ ಹೊತ್ತೊಯ್ಯುವ ನಿಮ್ಮ ಬರಹ ಮತ್ತು ಕವನಗಳಿಗೆ ನನ್ನ ಶರಣು.

    ಪ್ರತ್ಯುತ್ತರಅಳಿಸಿ