ಮಂಗಳವಾರ, ಜನವರಿ 1, 2013

ಹೊಸ ವರುಷ !



ಹೇಗೆ ವರ್ಣಿಸುವಿರಿ-
ಅದೇ ಹೊಸ ವರ್ಷದ ಪ್ರಾಸಗಳು ?
ದೊರೆಯದಿರೆ ಸಾವಿರವಾಗಿ-
ಅದೇ ಪುನರಪಿ ಶಬ್ಧಗಳು !

ಹೊಸತು ಮುದ್ದಿಸಿ, ಹಳತು ತುಳಿದು-
ಕನಸು ಹುಟ್ಟಿಸುವೆವು |
ಗೊತ್ತಿದೆ, ಕನಸು ಕಂಡೆವು |

ಕುರುಡು ರಾತ್ರಿಗೆ ಮಲಗಿ ಬಿದ್ದು
ಎದ್ದು ನಿಲ್ಲುತಾ, ಬೆಳಕು ನಕ್ಕೆವು |

ವಿಶ್ವ ಚುಚ್ಚುವನಕ -
ಶಾಪ ಮುಟ್ಟುವನಕ -
ಬದುಕು ತಬ್ಬಿ 
ಹಕ್ಕಿ ಹಾರುವೆವು |

ಬದುಕಿ, ಪ್ರೀತಿಸುವೆವು-
ಗಂಡು-ಹೆಣ್ಣಾಗಿ ನಡೆದು-
ವಧುಗಳಂತೆ ಅಲಂಕರಿಸಿ,
ಬೀದಿಗೆ ಹೆಣ ನಡೆವೆವು |

ನಗುವೆವು, ಅತ್ತು ಕರೆದು-
ನಂಬಿ ಭಯಗೊಂಡೆವು |
ಅದು ಹೊಸ ವರ್ಷದ -
ಹೊಸ ತೊಂದರೆಗಳು !
-ರವಿ ಮೂರ್ನಾಡು
ಚಿತ್ರಕೃಪೆ:ಗೂತಲ್ ಅಂತರ್ಜಾಲ

1 ಕಾಮೆಂಟ್‌:

  1. ಸಾಂಗತ್ಯದ ಸಾದೃಶ ಅನಾವರಣ ಇಲ್ಲಿದೆ.

    ಹೊಸ ವರ್ಷದ ನೆಪದಲ್ಲಿ ನಮ್ಮನ್ನು ಸಂಗ ಜೀವಿಯಾಗಿಸುವ ನಿಮ್ಮ ಉಪಾಯ ಅರ್ಥಗರ್ಭಿತ.

    ಹೊಸ ವರುಷವು ನಿಮಗೆ ಸಂತಸವನ್ನಲ್ಲದೆ ಬೇರೆ ಏನನನ್ನೂ ತಾರದಿರಲಿ. ನಿಮ್ಮ ನಗು ಅರಳುತಲಿರಲಿ.

    ಪ್ರತ್ಯುತ್ತರಅಳಿಸಿ